West Bengal Election: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು, ರಾಜ್ಯದ ರಾಜಕೀಯ ಅಖಾಡದಲ್ಲಿ ಭ್ರಷ್ಟಾಚಾರ, ನಿರುದ್ಯೋಗ ಮತ್ತು ಮತದಾರರ ಪಟ್ಟಿಯಂತಹ ಗಂಭೀರ ವಿಷಯಗಳ ನಡುವೆ ಅಚ್ಚರಿಯ ವಿಷಯವೊಂದು ಮುನ್ನೆಲೆಗೆ ಬಂದಿದೆ. ಬಂಗಾಳಿಗಳ ಅವಿಭಾಜ್ಯ ಅಂಗವಾಗಿರುವ ಮೀನು ಈಗ ಕೇವಲ ಆಹಾರವಾಗಿ ಉಳಿಯದೆ, ಚುನಾವಣಾ ಪ್ರಚಾರದ ಪ್ರಬಲ ಅಸ್ತ್ರವಾಗಿ ಮಾರ್ಪಟ್ಟಿದೆ.